ಸಿಲ್ವರ ಮರ (ಸಿಲ್ವರ್ ಓಕ್)ಆಸ್ಟ್ರೇಲಿಯ ಖಂಡದ ಮೂಲ ನಿವಾಸಿ. ಭಾರತದಲ್ಲಿ ಕಾಫಿತೋಟಗಳಲ್ಲಿ ನೆರಳಿಗಾಗಿ ತಂದು ಬೆಳೆಸಿದ್ದಾರೆ.ವೇಗವಾಗಿ ಬೆಳೆಯುವ ಮರ.ಅರಣ್ಯ ಇಲಾಖೆಯವರು ನೆಡು ತೋಪುಗಳಾಗಿಯೂ ಬೆಳೆಸುತ್ತಾರೆ. == ಸಸ್ಯ ಶಾಸ್ತ್ರೀಯ ವರ್ಗೀಕರಣ == ಇದು ಗ್ರೆವಿಲ್ಲೆ ರೊಬಸ್ಟ ಎಂಬ ಸಸ್ಯ ಶಾಸ್ತ್ರೀಯ ಹೆಸರಿದ್ದು,ಪ್ರೋಟೆಸಿ ಕುಟುಂಬಕ್ಕೆ ಸೇರಿದೆ. == ಸಸ್ಯದ ಗುಣಲಕ್ಷಣಗಳು == ಇದು ಮದ್ಯಮ ಗಾತ್ರದ ಎತ್ತರಕ್ಕೆ ವೇಗವಾಗಿ ಬೆಳೆಯುವ ನಿತ್ಯಹರಿದ್ವರ್ಣದ ಮರವಾಗಿದೆ.ಇದರ ಎಲೆಗಳ ಅಡಿಭಾಗ ಎಳೆ ಬೂದು ಬಣ್ಣದ್ದಾಗಿದ್ದು ಹೆಚ್ಚು ಕಡಿಮೆ ಬೆಳ್ಳಿಯ ಬಣ್ಣ ಹೊಂದಿರುವುದರಿಂದ ಇದಕ್ಕೆ 'ಸಿಲ್ವರ್ ಓಕ್' ಎಂದೂ ಹೆಸರಿದೆ.ಸುವರ್ಣ ವರ್ಣದ ಹೂಗಳಿವೆ. ಇದರ ದಾರುವು ನಸು ಕಂದು ಬಣ್ಣದ್ದಾಗಿದೆ. == ಉಪಯೋಗಗಳು == ಇದು ಕಾಫಿತೋಟಗಳಲ್ಲಿ ನೆರಳಿನ ಮರವಾಗಿ ಹೆಚ್ಚು ಉಪಯೋಗದಲ್ಲಿದೆ.ದಾರುವು ಉತ್ತಮ ಜಾತಿಯದ್ದಾಗಿದ್ದು ಸಂಗೀತಉಪಕರಣ,ಪೀಠೋಪಕರಣ,ಪದರ ಹಲಗೆಗಳ ತಯಾರಿಯಲ್ಲಿ ಉಪಯುಕ್ತವಾಗಿದೆ. ಗೃಹನಿರ್ಮಾಣದಲ್ಲಿಯೂ ಉಪಯೋಗದಲ್ಲಿದೆ. == ಗ್ಯಾಲರಿ == == ಉಲ್ಲೇಖಗಳು == ೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ